ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿಗಳಿಗೆ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಗೌರವ
ಗಡಿಭಾಗದ ಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿಗಳಿಗೆ 2026ನೇ ಸಾಲಿನ ಇಂಡೋ–ವಿಯೆಟ್ನಾಂ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಿ
ಗುರುಮಠಕಲ್ : ಗಡಿಭಾಗದ ಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿಗಳಿಗೆ 2026ನೇ ಸಾಲಿನ ಇಂಡೋ–ವಿಯೆಟ್ನಾಂ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಿ
ವಿಯೆಟ್ನಾಂ ದೇಶದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ ಶುಕ್ರವಾರ ನಡೆದ ಇಂಡೋ–ವಿಯೆಟ್ನಾಂ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಈ ಪ್ರತಿಷ್ಠಿತ ಫೆಲೋಶಿಪ್ ಪ್ರಶಸ್ತಿ ಪ್ರದಾನ ಮಾಡಲಾಯಿತು
ಪೂಜ್ಯರು ಕಳೆದ ಎರಡು ದಶಕಗಳಿಂದ ಗಡಿಭಾಗದಲ್ಲಿ ಬಸವತತ್ವದ ಪ್ರಚಾರ–ಪ್ರಸಾರ ಕೈಗೊಂಡು ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ ಜೊತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿದ್ದು ಅವರ ವಿಶಿಷ್ಟ ಸೇವೆಯನ್ನು ಗುರುತಿಸಿ ಅಂತರರಾಷ್ಟ್ರೀಯ ಮಟ್ಟದ ಈ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ನೀಡಿ ಸನ್ಮಾನಿಸಲಾಗಿದೆ
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿಗಳು
“ವಿಯೆಟ್ನಾಂನಲ್ಲಿ ನಡೆದ ಇಂಡೋ–ವಿಯೆಟ್ನಾಂ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ನನ್ನ ಸೇವೆಯನ್ನು ಗುರುತಿಸಿ 2026ನೇ ಸಾಲಿನ ಇಂಡೋ–ವಿಯೆಟ್ನಾಂ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಿರುವುದು ನಮ್ಮ ಗುರುಮಾಠಕಲ್ ಭಾಗದ ಜನರಿಗೆ ಸಂತಸದ ಸಂಗತಿ ಈ ಪ್ರಶಸ್ತಿಯನ್ನು ನನ್ನ ಭಕ್ತರಿಗೆ ಸಮರ್ಪಿಸುತ್ತೇನೆ ಈ ಪುರಸ್ಕಾರದಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ,” ಎಂದು ಶ್ರೀಗಳು ಹೇಳಿದರು.